ಕೋಗಿಲೆ ಕೂಗುತ್ತಿದೆ
ಚೈತ್ರ ಮಾಸ ಬಂದಿದೆ

ಮಳೆ ಬರುವ ಹಾಗಿದೆ
ಆಕಾಶ ಗುಡು ಗುಡು ಎಂದಿದೆ

ಗಿಡ ಮರಗಳು ಚಿಗುರೊಡೆದಿದೆ
ಮಾವಿನ ಕಾಯಿ ಬೆಳೆದಿದೆ

ಕಾಡಿನ ಮರಗಳು ಹಣ್ಣಾಗಿದೆ
ಇಪ್ಪೆ, ನೇರಳೆ, ಪೇರಳೆ, ಪನ್ನಿರಳೆ

ಹೊಸ ಸಂವತ್ಸರ ಶುರುವಾಗಿದೆ
ನವ ಯುಗಾದಿ ಹಬ್ಬ ಬಂದಿದೆ

ಬೇವು ಬೆಲ್ಲವನ್ನು ತಿನ್ನೋಣ
ಸುಖ ದುಃಖಗಳನ್ನು ಸಮನಾಗಿ ಸವಿಯೋಣ